ಕರ್ಮ

ಜಗತ್ತಿನದಲ್ಲಿ ಅದೆಷ್ಟೋ ಖಂಡಗಳಿವೆ. ಅದರಲ್ಲಿ ಒಂದೊಂದೂ ಖಂಡವೂ ಒಂದೊಂದು ವಿಶೇಷತೆಯನ್ನು ಹೊಂದಿದೆ.

ಹೌದು, ನಮ್ಮ ಭರತ ಖಂಡವು ಕರ್ಮಭೂಮಿ ಎಂದೆನಿಸಿದೆ. ಕಾರಣ ಇಲ್ಲಿ ಕರ್ಮದಿಂದಲೇ ಎಲ್ಲವನ್ನೂ ಸಾಧಿಸಬಹುದು.

ಕರ್ಮ ಎಂದರೇನು?

ಮಾನವನು ಯಾವತ್ತೂ ತಾನು ಮತ್ತು ತನ್ನ ಕುಟುಂಬ ಸುಖ ಸಂತೋಷದಿಂದ ಇರಬೇಕೆಂದು ಬಯಸುತ್ತಾನೆ. ಅದಕ್ಕೋಸ್ಕರ ಸತತ ಪ್ರಯತ್ನವನ್ನೂ ಮಾಡುತ್ತಲೇ ಇರುತ್ತಾನೆ. ಹಣದಿಂದಲೇ ಸುಖ ಸಿಗುವುದು ಎಂದು ತಿಳಿದು ಹಣ ಸಂಪಾದಿಸಲು ನಾನಾ ತರಹದ ಕರ್ಮಗಳನ್ನು ಮಾಡುತ್ತಾನೆ. ಆ ಕರ್ಮಗಳಲ್ಲಿ ಹೆಚ್ಚಿನವು ಪಾಪ ಕರ್ಮಗಳೇ ಆಗಿರುವುದು. ಅದರಿಂದ ಸಂಸಾರದಲ್ಲಿ ಪುನಃ ದುಃಖವನ್ನೇ ಅನುಭವಿಸುತ್ತಿರುತ್ತಾನೆ.

ಹಾಗಾಗಿಯೇ ಪ್ರಾಜ್ಞರು ಸುಖ ಹಾಗೂ ದುಃಖಗಳು ನಾವು ಮಾಡುವ ಕರ್ಮಗಳಿಗೆ ಅನುಸಾರವಾಗಿರುತ್ತದೆ ಎಂದು ಹೇಳುತ್ತಾರೆ.

“ಕರ್ಮಣಾ ಜಾಯತೇ ಜಂತು

ಕರ್ಮಣೇವಾ ವಿಥೀಯತೇ |

ಸುಖಂ ದುಃಖಂ ಭಯಂ ಕ್ಷೇಮಂ

ಕರ್ಮಣ್ಯೇವಂ ಭಿವದ್ಯತೇ”

ಆದರೂ ಮನುಷ್ಯನು ಇದೆಲ್ಲವನ್ನೂ ಲೆಕ್ಕಿಸದೆ ಪಾಪಕರ್ಮಗಳನ್ನು ಮಾಡುತ್ತಿರುತ್ತಾನೆ ಹಾಗೂ ಅದರಿಂದ ಬರುವ ದುಃಖಗಳಿಂದ ತಪ್ಪಿಸಿಕೊಳ್ಳಲು ಅವಿರತ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾನೆ. ಸುಖದ ನಿರೀಕ್ಷೆಯಲ್ಲಿರುವನು.

ಪಾಪಕರ್ಮಗಳನ್ನು ಮಾಡಿ ಸುಖ ನಿರೀಕ್ಷಿಸುವುದು ಹಾಸ್ಯಾಸ್ಪದವೇ ಸರಿ. ಕಾರಣ ‘ನಾವು ಮಾಡಿದ ನಮಗಾವುದಯ್ಯ’ ಎಂಬಂತೆ ನಾವು ಏನು ಕರ್ಮ ಮಾಡಿದರೂ ಅದರ ಫಲ ಅನುಭವಿಸಿಯೇ ತೀರಬೇಕಾಗುತ್ತದೆ.

ನಾವು ಕರ್ಮವನ್ನು ಬಿಟ್ಟರೂ ಕರ್ಮ ನಮ್ಮನ್ನು ಬಿಡುವುದಿಲ್ಲ.

“ತಥಾ ಧೇನು ಸಹಸ್ರೇಷು

ವತ್ಸೋ ಗಚ್ಛತಿ ಮಾತರಂ

ತಥಾ ಪೂರ್ವ ಕೃತಂ ಕರ್ಮಂ

ಕರ್ತಾರ ಮನು ಗಚ್ಛತಿ”

ಎಂಬಂತೆ ಸಾವಿರಾರು ಹಸುಗಳಿದ್ದರೂ ಕರುವು ತನ್ನ ತಾಯಿಯನ್ನು ಸುಲಭವಾಗಿ ಸೇರುವಂತೆ ನಾವು ಮಾಡಿದ ಕರ್ಮ ಫಲವು ನಾವು ಎಲ್ಲೇ ಇರಲಿ, ಹೇಗೇ ಇರಲಿ ನಮ್ಮ ಬೆನ್ನ ಹಿಂದೆಯೇ ಬಂದು ಬಿಡುವುದು. ಕರ್ಮದಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಆದಷ್ಟು ಹೆಚ್ಚು ಪುಣ್ಯ ಕರ್ಮಗಳನ್ನು ಮಾಡಿ. ಸಂಸಾರದಲ್ಲಿ ಸುಖವನ್ನು ಅನುಭವಿಸುವ ಉತ್ತಮ ಮಾರ್ಗ.

ಮನುಷ್ಯನು ಈ ಜನ್ಮದಲ್ಲಿರಲಿ, ಜನ್ಮಜನ್ಮಾಂತರದಲ್ಲಿಯೂ ಮಾಡಿರುವ ಅನೇಕಾನೇಕ ಕರ್ಮಗಳಿಗೆ ಅನುಸಾರವಾಗಿಯೇ ಜೀವನದಲ್ಲಿ ಸುಖ, ದುಃಖ, ಭಯ, ಕ್ಷೇಮ, ದೋಷ, ಶಾಪ, ಗ್ರಹಚಾರಗಳು ಬರುವುದು. ಈ ಎಲ್ಲ ದೋಷಗಳಲ್ಲಿ ಮುಖ್ಯವಾದದ್ದು ಮತ್ತು ಗಂಭೀರವಾದ ದೋಷಗಳೆಂದರೆ ಅದುವೇ ಪಿತೃದೋಷ ಅಥವಾ ಪಿತೃಶಾಪ.

ಪಿತೃಗಳು ಅಂದರೆ ನಮ್ಮ ಪೂರ್ವಜರು ಮತ್ತು ಅವರು ಮಾಡಿರುವ ಮಹಾ ಪಾತಕಗಳು ಅಥವಾ ಅವರಿಗೆ ಸದ್ಗತಿ ಸಿಗದೆ ಇದ್ದಿದ್ದರೆ ಅವರ ಶಾಪವೇ ಪಿತೃಶಾಪ (ಪ್ರೇತಶಾಪ).

ಪ್ರೇತಶಾಪದ ತೊಂದರೆಗಳು

  • ಕುಟುಂಬದ ಅಭಿವೃಧಿ ಕುಂಠಿತ
  • ವಿವಾಹ ತೊಂದರೆ
  • ಸಂತಾನ ಪ್ರತಿಬಂಧ
  • ಉದ್ಯೋಗ ನಷ್ಟ
  • ಸಂಸಾರ ವಿರಸ
  • ಆರೋಗ್ಯ ತೊಂದರೆ
  • ಮಾನಸಿಕ ಕ್ಷೋಭೆ
  • ದೈಹಿಕ ವ್ದಾಧಿ
  • ಆರ್ಥಿಕ ಹಿನ್ನಡೆ ಇತ್ಯಾದಿ ಇನ್ನೂ ಅನೇಕ ತೊಂದರೆಗಳು ಉಂಟಾಗುವುದು.

ಪ್ರೇತಶಾಪದ ಪರಿಹಾರಗಳು

ಪಿತೃಶಾಪದ ಪರಿಹಾರ ಆಗದೆ ಕುಟುಂಬ ಕಲ್ಯಾಣ ಅಸಾಧ್ಯ. ಶಾಪದ ಪರಿಹಾರ ಅತ್ಯವಶ್ಯ. ಅದಕ್ಕಾಗಿಯೇ ಶ್ರುತಿ ವಚನಗಳು ಈ ರೀತಿ ಹೇಳಿವೆ.

ದೇವತಾ ಶೋಭಾಯೈ ಪಿತರೋ ನು ಮದಂತು

ದೇವತೆಗಳು ನಮಗೆ ಅನುಗ್ರಹಿಸಬೇಕಾದರೆ ದೇವತೆಗಳು ನಮ್ಮ ಪೂರ್ವಜರನ್ನು ಕೇಳಿ ಕೊಡುತ್ತಾರೆ.

ಹಾಗಾಗಿ ಈ ಶಾಪದ ಪರಿಹಾರಕ್ಕಾಗಿಯೇ ಇರುವ ಪೂಜೆಯೇ

  • ನಾರಾಯಣ ಬಲಿ ಪೂಜೆ
  • ಪ್ರೇತ ಉದ್ಧಾರ
  • ತ್ರಿಪಿಂಡ ಶ್ರಾದ್ಧ

ಈ ಕರ್ಮಗಳನ್ನು ಪುಣ್ಯಕ್ಷೇತ್ರ, ಮೋಕ್ಷ ಕ್ಷೇತ್ರಗಳಲ್ಲಿ ಮಾಡುವುದು ಉತ್ತಮ.

ಮೋಕ್ಷ ಕ್ಷೇತ್ರಗಳು

  1. ಅಯೋಧ್ಯಾ
  2. ಮಥುರಾ
  3. ಮಾಯಾಪುರಿ
  4. ಕಾಶಿ
  5. ಕಾಂಚಿ
  6. ಅವಂತಿಕಾ ಪುರಿ
  7. ದ್ವಾರಕಾ
  8. ಗೋಕರ್ಣ

ಗೋಕರ್ಣ ಶ್ರೀ ರುದ್ರಪಾದ ಮೋಕ್ಷಸ್ಥಾನ

ಗೋಕರ್ಣ ರುದ್ರಪಾದ ಪೌರಾಣಿಕ ಹಿನ್ನೆಲೆ

ಸೂರ್ಯವಂಶದ ಮಿತ್ರಸಹನೆಂಬ ರಾಜನು ವಸಿಷ್ಠರ ಶಾಪದಿಂದ ರಾಕ್ಷಸನಾಗಿ ಅದೇ ಸಿಟ್ಟಿನಿಂದ ೧೦೧ ಮಕ್ಕಳನ್ನು ತಿಂದನು. ಇದರಿಂದ ಅವರೆಲ್ಲರೂ ನರಕವನ್ನು ಹೊಂದಿದರು. ಅವರ ಈ ದುರ್ಗತಿ ನಿವಾರಣೆಗಾಗಿ ವಸಿಷ್ಠರ ಅಪ್ಪಣೆಯಂತೆ ಋಷಿ ಪರಾಶರರು ಗೋಕರ್ಣಕ್ಕೆ ಬಂದು ರುದ್ರಪಾದವನ್ನು ನಿರ್ಮಿಸಿ ತಪಸ್ಸು ಮಾಡಿದರು. ಪ್ರತ್ಯಕ್ಷನಾದ ಈಶ್ವರನ ಅಪ್ಪಣೆಯಂತೆ ಅಲ್ಲಿ ಎಲ್ಲರ ಶ್ರಾದ್ಧವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲು ಆ ೧೦೧ ಮಂದಿಯೂ ಬ್ರಹ್ಮಲೋಕವನ್ನು ಹೊಂದಿದರು.

ಈ ಸ್ಥಳದು ಕುರಿತು ಇನ್ನೂ ಹಲವಾರು ಪುರಾಣಾದಿಗಳಲ್ಲಿ ಲಭ್ಯವಿದ್ದು. ಈ ಜಾಗದಲ್ಲಿ ಮಾಡಿದ ಕರ್ಮಕಾರ್ಯಗಳಿಗೆ ಅನಂತ ಫಲ ದೊರಕುವುದರಿಂದ ಗಯಾ ಕ್ಷೇತ್ರದಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ. ಈ ದೇವಾಲಯ ಮುಖ್ಯ ಸಮುದ್ರ ತೀರದ ಬಳಿ ಇದೆ.

ಗೋಕರ್ಣ ಶ್ರೀ ರುದ್ರಪಾದದಲ್ಲಿ ಈ ಪಿತೃಕರ್ಮಗಳನ್ನು ಮಾಡುವುದರಿಂದ ಖಂಡಿತವಾಗಿಯೂ ಪಿತೃಶಾಪ, ಪ್ರೇತಶಾಪ, ಸ್ತ್ರೀ ಶಾಪಗಳು ಪರಿಹಾರವಾಗುವುದು.

ಗೋಕರ್ಣ ರುದ್ರಪಾದ ಪೌರಾಣಿಕ ಹಿನ್ನೆಲೆ

ಗೋಕರ್ಣ ಶ್ರೀ ರುದ್ರಪಾದದಲ್ಲಿ ಪೂಜಾ ವಿಚಾರಗಳು

  1. ಮೋಕ್ಷ ನಾರಾಯಣ ಬಲಿ

ಕುಟುಂಬದಲ್ಲಿ ಯಾರಾದರೂ ಅಲ್ಪಾಯುಷ್ಯದಲ್ಲಿ (60 ವರ್ಷ ಒಳಗೆ) ದುರ್ಮರಣ (ವಿಷಪ್ರಾಷನ, ನೇಣು, ಅಗ್ನಿಸ್ಪರ್ಶ, ಕೊಲೆ ಇತ್ಯಾದಿ) ಹೊಂದಿದ್ದರೆ, ಅಂತಹ ಆತ್ಮದ ಸದ್ಗತಿಗೋಸ್ಕರ ನಡೆಸುವ ವಿಧಿಯೇ ನಾರಾಯಣ ಬಲಿ.

  1. ತ್ರಿಪಿಂಡ ಶ್ರಾದ್ಧ
    • ತನ್ನ ಕುಟುಂಬ
    • ತಾಯಿಯ ಕುಟುಂಬ
    • ಪತ್ನಿಯ ಕುಟುಂಬ

ಈ ರೀತಿ ಮೂರು ಕುಟುಂಬದ ದೋಷದ ಪರಿಹಾರಕ್ಕಾಗಿ ಮಾಡುವ ವಿಧಿ.

  1. ಗಯಾ ಶ್ರಾದ್ಧ

ಪ್ರತಿ ವರ್ಷವೂ ತಮ್ಮ ಪಿತೃಗಳಿಗೆ ಮಾಡುವ ಶ್ರಾದ್ಧ ಕರ್ಮಗಳನ್ನು ಮಾಡಲು ಅಶಕ್ತವಾದರೆ, ಅವರಿಗೋಸ್ಕರ ಒಮ್ಮೆಯೇ ಮಾಡುವ ಶ್ರಾದ್ಧ.

  1. ತೀರ್ಥ ಶ್ರಾದ್ಧ

ಮೋಕ್ಷ ಸ್ಥಾನಗಳಿಗೆ ಹೋದಾಗ ಗತಿಸಿದ ಎಲ್ಲರಿಗೂ ನೀಡುವ ಪಿಂಡದಾನ.

  1. ಆತ್ಮಶ್ರಾದ್ಧ

ನಿರ್ಗತಿಕರು, ಸಂತಾನ ಇಲ್ಲದವರು ತಾವು ಸಾಯುವ ಮೊದಲೇ ಮಾಡುವ ಶ್ರಾದ್ಧ.

  1. ನಾಗಬಲಿ

ಸರ್ಪ ಶಾಪ ನಿವಾರಣೆಗಾಗಿ ಮಾಡುವ ವಿಧಿ.

For more information on any pujas and any queries please contact us

Harish Soori Shashtri

Gokarna Karnataka 581326

9964087909