ಮೋಕ್ಷ ನಾರಾಯಣ ಬಲಿ ಪೂಜೆಯನ್ನು ಅತೃಪ್ತ ಆತ್ಮಗಳ ಮೋಕ್ಷಕ್ಕೋಸ್ಕರ ಮಾಡಲಾಗುತ್ತದೆ.

ಅತೃಪ್ತ ಆತ್ಮಗಳು

ಕಲಿಯುಗದಲ್ಲಿ ಪರಾಶರ ಸ್ಮೃತಿ ಗ್ರಂಥಗಳು ಆಧಾರವಾಗಿದೆ. ಪರಾಶರ ಗ್ರಂಥಗಳಲ್ಲಿ ಹೇಳಿದ ಹಾಗೆ ಕಲಿಯುಗದಲ್ಲಿ ಮನುಷ್ಯನು 60 ವರ್ಷ ಬದುಕಿದರೆ ಅದು ದೀರ್ಘಾಯುಷ್ಯವೆಂದು ಹೇಳಲಾಗಿದೆ.

ಯಾವನು 60 ವರ್ಷ ಬದುಕುವುದಿಲ್ಲವೋ ಅಂದರೆ 60 ವರ್ಷ ಮೊದಲೇ ಸಾವನ್ನಪ್ಪಿದರೆ ಅದು ದುರ್ಮರಣವೆಂದು ಪರಿಗಣಿಸಲ್ಪಡುತ್ತದೆ.

ಈ ರೀತಿ 60 ವರ್ಷ ಮೊದಲು ಅಥವಾ

  • ವಿಷಪ್ರಾಶನ ಮರಣ
  • ನೇಣು ಹಾಕಿಕೊಳ್ಳುವುದು
  • ನೀರಿನಲ್ಲಿ ಸಾಯುವುದು
  • ಮರದಿಂದ, ಕಟ್ಟಡದಿಂದ ಬಿದ್ದು ಸಾಯುವುದು
  • ಬೆಂಕಿ ಅವಘಡಗಳಲ್ಲಿ ಸಾವು
  • ವಿದ್ಯುತ್ ಸ್ಪರ್ಶದಿಂದ
  • ಮದುವೆ ಆಗದೆ ಬ್ರಹ್ಮಚಾರಿ ಮರಣ
  • ಪ್ರಸೂತಿಕಾ ಅಂದರೆ ಬಾಣಂತಿ ಮರಣ
  • ಮಕ್ಕಳು, ಸಂತಾನ ಇಲ್ಲದೆ ಸಾವು
  • ಕ್ಯಾನ್ಸರ್, ಕುಷ್ಠ, ಇತ್ಯಾದಿ ಮಾರಕ ರೋಗಗಳಿಂದ ಸಾವು
  • ಕೊಲೆ, ಮರ್ಡರ್ ಇತ್ಯಾದಿ ಮರಣ

ಈ ರೀತಿ ಸಾವನ್ನಪ್ಪಿದರೆ ಇವೆಲ್ಲವೂ ದುರ್ಮರಣ (ಅಕಾಲ ಮರಣ)ವೆಂದಾಗುವುದು.

ಈ ರೀತಿ ಅಕಾಲ ಮರಣ ಹೊಂದಿದರೆ ಅಂತಹ ಆತ್ಮಗಳ ಸದ್ಗತಿಗೋಸ್ಕರ ಮಾಡುವ ಪೂಜೆಯೇ ನಾರಾಯಣ ಬಲಿ.

ನಾರಾಯಣಬಲಿ ಪೂಜೆಯ ಸ್ಥಾನಗಳು

ಗೋಕರ್ಣ

ಅಯೋಧ್ಯಾ

ಮಥುರಾ

ಮಾಯಾ

ಕಾಶಿ

ಕಾಂಚಿ

ಹರಿದ್ವಾರ

ದ್ವಾರಕಾ

ಬದರಿ

ಗಯಾ ಇತ್ಯಾದಿ ಮೋಕ್ಷ ಕ್ಷೇತ್ರಗಳಲ್ಲಿ ಮಾಡಬೇಕೆಂದು ಪುರಾಣಗಳಲ್ಲಿ ಹೇಳಿದೆ.

ನಾರಾಯಣ ಬಲಿ ಪೂಜೆಯ ಸಮಯ

ನಾರಾಯಣ ಬಲಿ ಪೂಜೆಯನ್ನು ವರ್ಷದ ಎಲ್ಲ ಮಾಸಗಳಲ್ಲಿ ಮಾಡಬಹುದು. ಅದರಲ್ಲೂ ಪ್ರತಿ ಮಾಸದ ಶುಕ್ಲ ಮತ್ತು ಕೃಷ್ಣ ಪಕ್ಷದ ಪಂಚಮಿ, ಷಷ್ಠಿ, ಸಪ್ತಮಿ, ದಶಮಿ ಏಕಾದಶಿ, ದ್ವಾದಶಿ, ಚತುರ್ದರ್ಶಿ, ಹುಣ್ಣಿಮೆ ಅಥವಾ ಅಮಾವಾಸ್ಯೆ – ಈ ದಿನಗಳು ವಿಶೇಷವಾಗಿದೆ.

‘ಆಶಾಢಾದಿ ಅಪರ ಪಂಚ ಪಕ್ಷಸು’ ಎನ್ನುವಂತೆ ಆಶಾಢ, ಶ್ರಾವಣ, ಭಾದ್ರಪದ, ಅಶ್ವಿನ, ಕಾರ್ತಿಕ – ಈ ಐದು ಮಾಸಗಳು ಪಿತೃಗಳಿಗೆ ಪ್ರಿಯವಾದುದಾಗಿದೆ.

ಈ ರೀತಿ ದುರ್ಮರಣ, ಅಕಾಲ ಮರಣದಿಂದ ಸಾವನ್ನಪ್ಪಿದರೆ, ಅಂತಹ ಆತ್ಮಗಳಿಗೆ ಮೋಕ್ಷ ಸಿಗಲು ಈ ಪೂಜೆಯನ್ನು ಮಾಡಬೇಕು. ಇಲ್ಲವಾದರೆ ಅಂತಹ ಅತೃಪ್ತ ಆತ್ಮಗಳ ಶಾಪವೇ ಕಾಲಕ್ರಮೇಣ ಪಿತೃಶಾಪ, ಪ್ರೇತಶಾಪ, ಪಿತೃದೋಷ, ಪ್ರೇತದೋಷ, ಸ್ತ್ರೀ ಶಾಪ ಇತ್ಯಾದಿ ಶಾಪಗಳಾಗಿ ಕುಟುಂಬಕ್ಕೆ ಕಾಡುವುದು.

ಈ ಶಾಪದ ಪರಿಹಾರಕ್ಕಾಗಿ ಮಾಡುವ ಪೂಜೆಯೇ ನಾರಾಯಣ ಬಲಿ ಪೂಜೆ.

ಪಿತೃದೋಷದ ತೊಂದರೆಗಳು

  1. ಮದುವೆ ಆಗದೆ ಇರುವುದು
  2. ಸಂತಾನ ತೊಂದರೆ
  3. ಮಾನಸಿಕ ತೊಂದರೆ
  4. ಆರ್ಥಿಕ ಅಭಿವೃದ್ಧಿ ಕುಂಠಿತ
  5. ದೈಹಿಕ ವ್ಯಾಧಿ
  6. ವಂಶದ ಅಭಿವೃದ್ಧಿ ತೊಂದರೆ
  7. ರೋಗ ಬಾಧೆ
  8. ಉದ್ಯೋಗ, ವ್ಯವಹಾರದ ಹಿನ್ನಡೆ

ಪಿತೃದೋಷಕ್ಕೆ ಪರಿಹಾರ

  1. ಮೋಕ್ಷ ನಾರಾಯಣ ಬಲಿಪೂಜೆ
  2. ತ್ರಿಪಿಂಡಿ ಶ್ರಾದ್ಧ
  3. ಪ್ರೇತ ಸಂಸ್ಕಾರ
  4. ಪ್ರೇತ ಶಾಂತಿ
  5. ತಿಲ ಹವನ ಮಾಡುವುದು

ನಾರಾಯಣ ಬಲಿ ಪೂಜೆಯ ವಿಧಾನ

ಕ್ಷೇತ್ರದಲ್ಲಿ ಎರಡು ದಿನ ಮಾಡಲಾಗುವುದು ಅಥವಾ ಒಂದು ದಿನದಲ್ಲಿಯೂ ಮಾಡಬಹುದು.

  1. ಸಂಕಲ್ಪ ಸ್ನಾನ
  2. ಪ್ರೇತ ಆಕರ್ಷಣೆ
  3. ಕಲಶ ಸ್ಥಾಪನೆ ಮತ್ತು ಪೂಜೆ
  4. ಸಹಸ್ರನಾಮ ಪಾರಾಯಣ
  5. ನಾರಾಯಣ ಬಲಿ ಹೋಮ
  6. ನಾರಾಯಣ ಬಲಿ ಶ್ರಾದ್ಧ
  7. ಪಂಚಕ ಶ್ರಾದ್ಧ
  8. ನಾರಾಯಣ ಬಲಿ ದಾನ
  9. ಕ್ಷೀರ ತರ್ಪಣ
  10. ವಾಯಸ ಬಲಿ ಹರಣ
  11. ಉತ್ತರ ಪೂಜೆ
  12. ಆಶೀರ್ವಾದ