ಕುಟುಂಬದಲ್ಲಿ ಯಾರಾದರೂ ಜಾತಕ, ಕುಂಡಲಿಯಲ್ಲಿ ಅಥವಾ ಜ್ಯೋತಿಷ್ಯ ಪ್ರಶ್ನೆ ಮಾರ್ಗದಲ್ಲಿ ಸರ್ಪದೋಷ ಅಥವಾ ರಾಹು, ಕೇತು ದೋಷ ಇದೆ ಎಂದು ಹೇಳಿದರೆ, ಅದರ ಪರಿಹಾರಕ್ಕಾಗಿ ಮಾಡುವ ಪೂಜೆಯೇ ನಾಗಬಲಿಪೂಜೆ.

ಸರ್ಪಶಾಪಕ್ಕೆ ಕಾರಣ

ನಾವು ಈ ಜನ್ಮದಲ್ಲಿ ಅಥವಾ ಹಿಂದಿನ ಜನ್ಮದಲ್ಲಿಯಾದರೂ ಪ್ರತ್ಯಕ್ಷ ಸರ್ಪವನ್ನು ಹೊಡೆದರೆ ಅಥವಾ ಬೇರೆಯವರ ಮೂಲಕ ಹೊಡೆಸಿದರೆ ಅಥವಾ ಬೇರೆಯವರು ಹೊಡೆಯುವುದನ್ನು ನೋಡಿದರೆ ಅಥವಾ ಮನೆ ಕಟ್ಟುವಾಗ, ಹೊಲ ಮಾಡುವಾಗ ಸರ್ಪ ಹುತ್ತವನ್ನು ಕಡಿಸುವುದು, ಸರ್ಪದ ಮೊಟ್ಟೆಯನ್ನು ಹಾಳು ಮಾಡುವುದು ಅಥವಾ ನಿಧಿ ಆಸೆಗಾಗಿ ಸರ್ಪವನ್ನು ಹಿಂಸಿಸುವುದು, ಸರ್ಪ ಪೂಜೆಯನ್ನು ನಿಂದಿಸುವುದು, ಸರ್ಪ ವಿಷ ಸಂಗ್ರಹ ಮಾಡಿ ವ್ಯಾಪಾರ ಮಾಡುವುದು ಅಥವಾ ತಂದೆ-ತಾಯಿಯರ ಮಾತನ್ನು ಕೇಳದೆ ಹಿಂಸೆ ಕೊಡುವುದು, ಈ ರೀತಿಯಾದ ಕರ್ಮಗಳಿಂದ ಸರ್ಪ ಶಾಪ ಬರುವುದು ಎಂದು ಬ್ರಹ್ಮಾಂಡ ಪುರಾಣದಲ್ಲಿ ಹೇಳಿದೆ.

ಸರ್ಪಶಾಪದ ತೊಂದರೆಗಳು

  • ಮದುವೆ ವಿಳಂಬ
  • ಸಂತಾನ ತೊಂದರೆ
  • ಆರ್ಥಿಕ ತೊಂದರೆ
  • ಚರ್ಮರೋಗ ಬಾಧೆ
  • ಹೃದ್ರೋಗ
  • ಉದರ ಶೂಲ ಬಾಧೆ ಇತ್ಯಾದಿ

ಸರ್ಪಶಾಪ ಪರಿಹಾರ

ಪುಣ್ಯಕ್ಷೇತ್ರದಲ್ಲಿ ಸರ್ಪ ಸಂಬಂಧಿ ಪೂಜೆ ಮಾಡುವುದು.

  • ಸರ್ಪ ಸಂಸ್ಕಾರ
  • ನಾಗಬಲಿ ಪೂಜೆ
  • ಆಶ್ಲೇಷಾ ಬಲಿ ಪೂಜೆ
  • ರಾಹು ಕೇತು ಶಾಂತಿ
  • ಕಾಳಸರ್ಪ ಶಾಂತಿ ಇತ್ಯಾದಿ ಪೂಜೆಗಳನ್ನು ಮಾಡುವುದರಿಂದ ಸರ್ಪ ದೋಷ ಪರಿಹಾರವಾಗುವುದು.

ಸರ್ಪಪೂಜೆಯ ಸಮಯ

ಉತ್ತರಾಯಣ ಪರ್ವಕಾಲ

ಶುಕ್ಲ ಪಕ್ಷ ಪಂಚಮಿ, ಷಷ್ಠಿ, ದಶಮಿ, ಪೂರ್ಣಿಮೆ