ಪಿತೃ ದೋಷದ ಪರಿಹಾರಕ್ಕಾಗಿ ಮಾಡುವ ವಿಧಿ. ಪಿತೃದೋಷಗಳು ಮೂರು ಕುಟುಂಬಕ್ಕೆ ಸಂಬಂಧಿಸಿರುತ್ತದೆ.
- ಪಿತೃಕುಟುಂಬ , ತಂದೆ
- ಮಾತೃಕುಟುಂಬ , ತಾಯಿ
- ಹೆಂಡತಿ ಕುಟುಂಬ
ಈ ರೀತಿ ಈ ಮೂರು ಕುಟುಂಬಗಳಲ್ಲಿ ಯಾರಾದರೂ ಅಕಾಲ ಮರಣ ಹೊಂದಿದರೆ ಮತ್ತು ಅವರ ಹೆಸರು ಗೊತ್ತಿಲ್ಲದಿದ್ದರೂ , ಆ ಎಲ್ಲ ಆತ್ಮಗಳ ಸದ್ಗತಿಗೋಸ್ಕರ ಮಾಡುವ ಪೂಜೆಯೇ ತ್ರಿಪಿಂಡ ಶ್ರಾದ್ಧ.
ತ್ರಿಪಿಂಡ ಶ್ರಾದ್ಧ ವಿಶೇಷತೆ
ಈ ಪೂಜೆಯನ್ನು ನಾರಾಯಣ ಬಲಿಪೂಜೆಯ ಜೊತೆಯೂ ಮಾಡಬಹುದು. ಅಥವಾ ಪ್ರತ್ಯೇಕವಾಗಿಯೂ ಮಾಡಬುಹುದು.
ತ್ರಿಪಿಂಡ ಶ್ರಾದ್ಧದ ಜೊತೆಯಲ್ಲಿ ಈ ಪಾಪದ ಪರಿಹಾರಕ್ಕಾಗಿ ಪ್ರಾಯಶ್ಚಿತ ತಿಲ ಹೋಮವನ್ನೂ ಮಾಡಿಸುವುದು ಉತ್ತಮ. ನಾರಾಯಣ ಬಲಿ ಮತ್ತು ತ್ರಿಪಿಂಡ ಶ್ರಾದ್ಧವನ್ನು ೧ ಅಥವಾ ೨ ದಿನಗಳಲ್ಲಿಯೂ ಮಾಡಬುಹುದು.